ನಾಗಲಿಂಗ ಪುಷ್ಪ ಮರ (- )ಹೆಸರೇ ಸೂಚಿಸುವಂತೆ ನಾಗಲಿಂಗಾಕಾರದ ಹೂ ಬಿಡುವ ಮರ.ಇದು ದಕ್ಷಿಣ ಅಮೇರಿಕ ಹಾಗೂ ಕೆರೆಬಿಯನ್ ಪ್ರದೇಶದ ಮರ. ಭಾರತದಲ್ಲಿ ಅಲಂಕಾರಕ್ಕಾಗಿ ತಂದು ಬೆಳೆಸಿರುತ್ತಾರೆ. ತಮಿಳುಭಾಷೆಯಲ್ಲಿ ಇದಕ್ಕೆ 'ಶಿವಲಿಂಗ ಪುಷ್ಪ' ಎಂದೂ ತೆಲುಗುಭಾಷೆಯಲ್ಲಿ 'ಮಲ್ಲಿಕಾರ್ಜುನ ಪುಷ್ಪ' ಎಂಬ ಹೆಸರೂ ಇದೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಲೆಸಿತಿಡೇಸಿ ()ಕುಟುಂಬಕ್ಕೆ ಸೇರಿದ್ದು,ಕೌರೌಪಿಟ ಜಿಯನೆಂನ್ಸಿಸ್( )ಎಂಬ ಸಸ್ಯಶಾಸ್ತ್ರೀಯ ಹೆಸರಿದೆ. == ಸಸ್ಯದ ಗುಣಲಕ್ಷಣಗಳು == ಇದು ಮಧ್ಯಮಗಾತ್ರದ ಮರ.ವಿಶೇಷವಾದ ಬೀಳಲುಗಳಲ್ಲಿ ಆಕರ್ಷಕವಾದ ಹೂ ಬಿಡುತ್ತದೆ. ದೊಡ್ಡಗಾತ್ರದ ಕಾಯಿ ಕಾಂಡಕ್ಕೆ ತಾಗಿದಂತಿರುತ್ತದೆ. == ಉಪಯೋಗಗಳು == ಇದನ್ನು ಅಲಂಕಾರಕ್ಕೆ ಸಸ್ಯೋದ್ಯಾನವನಗಳಲ್ಲಿ ಬೆಳೆಸುತ್ತಾರೆ.ಭಾರತದಲ್ಲಿ ಹಲವಾರು ಶಿವ ದೇವಾಲಯಗಳ ಬಳಿ ನೆಟ್ಟು ಬೆಳೆಸಿದ್ದಾರೆ. ಇದರ ಕಾಯಿಯನ್ನು ಪಶು ಆಹಾರವಾಗಿ ಕೆಲವು ಕಡೆಗಳಲ್ಲಿ ಉಪಯೋಗಿಸುವ ಬಗ್ಗೆ ಉಲ್ಲೇಖವಿದೆ.